Navabharat Yakshagana Academy

THIS YEAR WE ARE CELEBRATING 80 YEAR OF ADULT EDUCATION

Navabharat Yakshagana Academy

 The “Navabharat Yakshagana Academy” was inaugurated at the school on 15.06.2015 by eminent Doctor Dr. P.V. Shenoy. Soon after the launching of Yakshagana Academy at the school, Yakhshagana training classes have been offered every Sunday from 10am to 1pm on a regular basis which continues till today.

 The art of Yakshagana, the best of Indian fine arts, is imparted here to the art-loving students at the prestigious schools of the city. Navabharat Yakshagana Academy has been offering Yakshagana programs regularly since its inception. The academy has been giv-ing programs in ten different places like Kadri Temple, Kadekaru Durgavan Kshetra, Durga Devi Temple, Koppalakadu, Sri Gayatri Devi Temple, opposite the school, etc.

 On 04.05.2019 celebrated its Pancham Vardhantyutsavam. A con-tinuous series of programs were given from 3 PM to 12 PM on that day in the hall of Balambat family. The patron of the committee Dr. Satya Krishna Bhat, Shri Sridhara Enmakje, lawyers and Jayaram Pujari were honored in the presence of dignitaries.

 Two Yakshagana programs “Sri Satyanarayana Vrata Mahatme” and “Sridevi Mahisha Mardini” were presented by Navabharat Yakshagana Academy. These programs were aired live on Namma Kudla V4 Channel and were appreciated by people. The academy has been regularly giving two Bayalatas every year.
 Several programmes have been conducted under the auspices of the Department of Kannada and Culture for two years, and the or-ganization's tenth anniversary will be held in the next two years. Many yaksha artistes are receiving yaksha education here. Regular classes are held every Sunday from 10 am to 01 pm.
  All this is happening on the heels of Navbharat (Yakshagana) Education Society (R). In the last academic year, in association with Karnataka Tulu Academy, Tulu story "Draupadi of Abbaro" was played which became a huge hit. From 11-year-old boys, teenagers to sixty years old are getting Yaksha education here.


Yakshaguru Varkadi Sri Ravi Alevooraya, Varkadi -A brief introduction

• 52 years of experience in Yakshagana arena
• Stage entry at the age of 6 years
• Famous as female artist
• “Kannada Ratna State Award” at Mantralaya – in All India Speech and Literature Conference
• D.K. Zilla Rajyotsava award has been given to own children's mela - "Sarayu" Bala Yaksha Vrinda (R) Chil-dren's Mela Kodikal.
• Coached many women's teams as Yaksha Guru.



ನವಭಾರತ ಯಕ್ಷಗಾನ ಅಕಾಡೆಮಿ

ಖ್ಯಾತ ವೈದ್ಯ ಡಾ.ಪಿ.ವಿ. ಶೆಣೈ ಅವರು 15.06.2015 ರಂದು ಶಾಲೆಯಲ್ಲಿ “ನವಭಾರತ ಯಕ್ಷಗಾನ ಅಕಾಡೆಮಿ” ಉದ್ಘಾಟಿಸಿದರು.
 ಶಾಲೆಯಲ್ಲಿ ಯಕ್ಷಗಾನ ಅಕಾಡೆಮಿ ಪ್ರಾರಂಭವಾದ ಬೆನ್ನಲ್ಲೇ, ಯಕ್ಷಗಾನ ತರಬೇತಿ ತರಗತಿಗಳನ್ನು ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಿಯಮಿತವಾಗಿ ನೀಡಲಾಗುತ್ತದೆ, ಇದು ಇಂದಿನವರೆಗೂ ಮುಂದುವರಿಯುತ್ತದೆ.
 ಭಾರತೀಯ ಲಲಿತ ರಂಗಕಲೆಗಳಲ್ಲಿ ಶ್ರೇಷ್ಠವಾದ, ಅಂತರಾಷ್ಟೀಯ ಮಟ್ಟದ ಯಕ್ಷಗಾನ ಕಲೆಯನ್ನು ನಗರದ ಪ್ರತಿಷ್ಠಿತ ಶಾಲೆಗಳ ಕಲಾಸಕ್ತ ವಿದ್ಯಾರ್ಥಿಗಳಿಗೂ ಇಲ್ಲಿ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ನವ ಭಾರತ ಯಕ್ಷಗಾನ ಅಕಾಡೆಮಿಯು ಆರಂಭವಾದ ರ್ಷದಿಂದಲೂ ನಿಯಮಿತವಾಗಿ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ. ಕದ್ರಿ ದೇವಸ್ಥಾನ, ಕಡೆಕಾರು ದುರ್ಗಾವನ ಕ್ಷೇತ್ರ, ದುರ್ಗಾ ದೇವಿ ದೇವಸ್ಥಾನ, ಕೊಪ್ಪಲಕಾಡು, ಶ್ರೀ ಗಾಯತ್ರಿ ದೇವಿ ದೇವಸ್ಥಾನ, ಶಾಲೆಯ ಎದುರು ಹೀಗೆ ಹತ್ತು ಹಲವು ಕಡೆಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ ಅಕಾಡೆಮಿ.
 04.05.2019ನೇ ಸಂದರ್ಭದಲ್ಲಿ ತನ್ನ ಪಂಚಮ ವರ್ಧಂತ್ಯುತ್ಸವವನ್ನು ಆಚರಿಸಿಕೊಂಡಿದೆ. ಬಾಳಂಭಟ್‌ ಮನೆತನದ ಸಭಾಭವನದಲ್ಲಿ ಆ ದಿನ ಸಾಯಂಕಾಲ 3 ಘಂಟೆಯಿಂದ ಸಂಭ್ರಮದಿಂದ ರಾತ್ರಿ 12ರವರೆಗೆ ನಿರಂತರ ಕಾರ್ಯಕ್ರಮ ಸರಣಿಗಳನ್ನು ನೀಡಿದೆ. ಸಮಿತಿಯ ಪೋಷಕರಾದ ಡಾ| ಸತ್ಯ ಕೃಷ್ಣ ಭಟ್‌, ಶ್ರೀ ಶ್ರೀಧರ ಎಣ್ಮಕಜೆ, ನ್ಯಾಯವಾದಿಗಳು ಹಾಗೂ ಜಯರಾಮ ಪೂಜಾರಿಯವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ ಹಾಗೂ ಶ್ರೀದೇವಿ ಮಹಿಷ ಮರ್ದಿನಿ ಎಂಬ ಎರಡು ಯಕ್ಷಗಾನಗಳನ್ನು ನೀಡಿತ್ತು. ಈ ಕಾರ್ಯಕ್ರಮಗಳು ನಮ್ಮ ಕುಡ್ಲ V4 ಚಾನಲ್ನಲ್ಲಿ ನೇರ ಪ್ರಸಾರಗೊಂಡು ಜನ ಮೆಚ್ಚುಗೆ ಪಡೆದಿತ್ತು ವರ್ಷಕ್ಕೆರಡು ಬಯಲಾಟಗಳನ್ನು ನಿಯಮಿತವಾಗಿ ನೀಡುತ್ತಾ ಬರುತ್ತಿದೆ ಅಕಾಡೆಮಿ.
 ಎರಡು ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲೂ ಕಾರ್ಯಕ್ರಮ ನೀಡಿದ್ದಿದೆ, ಇನ್ನೆರಡು ವರ್ಷಗಳಲ್ಲಿ ಸಂಸ್ಥೆಯ ದಶಮಾನೋತ್ಸವ ನಡೆಯಲಿದೆ. ಅನೇಕ ಯಕ್ಷ ಕಲಾವಿದರು ಇಲ್ಲಿ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ದಿನ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 01 ರವರೆಗೆ ನಿಯಮಿತ ತರಗತಿಗಳು ನಡೆಯುತ್ತಿವೆ. ಇವೆಲ್ಲವೂ ನವಭಾರತ(ಯಕ್ಷಗಾನ) ಎಜ್ಯುಕೇಶನ್‌ ಸೊಸೈಟಿ (ರಿ)ಯ ನೆರಳಿನಲ್ಲೇ ನಡೆಯುತ್ತಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ, ಕರ್ನಾಟಕ ತುಳು ಅಕಾಡೆಮಿಯ ಸಹಕಾರದಲ್ಲಿ "ಅಬ್ಬರೊದ ದ್ರೌಪದಿ' ಎಂಬ ತುಳು ಆಖ್ಯಾನವನ್ನು ಆಡಿ ದಾಖಲೆ ಬರೆದಿದೆ. 11ರ ಬಾಲಕ, ತರುಣರಿಂದ ಹಿಡಿದು ಅರುವತ್ತು ವರ್ಷದವರೆಗಿನವರೂ ಇಲ್ಲಿ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ.

ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯ, ವರ್ಕಾಡಿ - ಸಂಕ್ಷಿಪ್ತ ಪರಿಚಯ

• ಯಕ್ಷಗಾನ ರಂಗದಲ್ಲಿ 52 ವರ್ಷಗಳ ಅನುಭವ
• 6ನೇ ವರ್ಷಕ್ಕೆ ರಂಗ ಪ್ರವೇಶ
• ಖ್ಯಾತ ಸ್ತ್ರೀ ಪಾತ್ರಧಾರಿಯಾಗಿ ಖ್ಯಾತಿ
• ಮಂತ್ರಾಲಯದಲ್ಲಿ “ಕನ್ನಡ ರತ್ನ ರಾಜ್ಯ ಪ್ರಶಸ್ತಿ” - ಅಖಿಲ ಭಾರತ ವಚನ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ
• ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವಂತ ಮಕ್ಕಳ ಮೇಳಕ್ಕೆ ದೊರೆತಿದೆ. “ಸರಯೂ' ಬಾಲ ಯಕ್ಷ ವೃಂದ (ರಿ.) ಮಕ್ಕಳ ಮೇಳ ಕೋಡಿಕಲ್.
• ಅನೇಕ ಮಹಿಳಾ ತಂಡಗಳಿಗೂ ಯಕ್ಷ ಗುರುವಾಗಿ ಭೋಧನೆ